ಅರವಿಂದ ಅಡಿಗ (ಹುಟ್ಟು ಅಕ್ಟೋಬರ್ ೨೩, ೧೯೭೪) ಒಬ್ಬ ಭಾರತೀಯ ಪತ್ರಕರ್ತ ಮತ್ತು ಆಂಗ್ಲ ಭಾಷೆಯ ಲೇಖಕ. ಇವರ ಮೊದಲ ಕಾದಂಬರಿ ದ ವೈಟ್ ಟೈಗರ್ ಗೆ ೨೦೦೮ರ ಮ್ಯಾನ್ ಬೂಕರ್ ಪ್ರಶಸ್ತಿ ದೊರಕಿತು. == ಜನ್ಮ ಮತ್ತು ಶಿಕ್ಷಣ == ಇವರು ೧೯೭೪ ರಲ್ಲಿ ಚೆನ್ನೈದಲ್ಲಿ ಜನಿಸಿದರು. ನಂತರ ಮಂಗಳೂರಿನ 'ಕೆನರಾ ಹೈಸ್ಕೂಲ್', ಮತ್ತು 'ಸೇಂಟ್ ಅಲೋಯ್ಶಿಯಸ್ ಕಾಲೇಜು'ಗಳಲ್ಲಿ ಅಭ್ಯಸಿಸಿ ೧೯೯೦ರಲ್ಲಿ ತಮ್ಮ ಹತ್ತನೇಯ ತರಗತಿಯಲ್ಲಿ ತೇರ್ಗಡೆ ಹೊಂದಿದರು. ಮುಂದೆ ತಮ್ಮ ಮನೆಯವರ ಜೊತೆಗೆ ಆಸ್ಟ್ರೇಲಿಯಾ ದೇಶಕ್ಕೆ ಹೋದ ಇವರು, 'ಜೇಮ್ಸ್ ರುಸ್ ಅಗ್ರಿಕಲ್ಚರಲ್ ಕಾಲೇಜಿ'ನಲ್ಲಿ ತಮ್ಮ ಮುಂದಿನ ಶಿಕ್ಷಣವನ್ನು ಪಡೆದರು. ಕೋಲಂಬಿಯಾ ವಿಶ್ವವಿದ್ಯಾಲಯ', 'ನ್ಯೂಯಾರ್ಕ' ಮತ್ತು 'ಮ್ಯಾಗ್ಡಲೀನ್ ಕಾಲೇಜು', 'ಆಕ್ಸಫೋರ್ಡನಲ್ಲಿ ಆಂಗ್ಲ ಸಾಹಿತ್ಯ'ವನ್ನು ಅಭ್ಯಸಿಸಿದರು. ಅವರ ಲೇಖನಗಳು, 'ನ್ಯೂಯಾರ್ಕರ್', 'ದ ಸಂಡೆ ಟೈಮ್ಸ್', 'ದ ಫೈನಾನ್ಶಿಯಲ್ ಟೈಮ್ಸ್', ಹಾಗೂ 'ಟೈಮ್ಸ್ ಆಫ್ ಇಂಡಿಯ ದಿನಪತ್ರಿಕೆ'ಗಳಲ್ಲಿ ಪ್ರಕಟವಾಗುತ್ತವೆ. ಅವರ ಹೊಸ ಕಾದಂಬರಿ, 'ಲಾಸ್ಟ್ ಮ್ಯಾನ್ ಇನ್ ಟವರ್' ಎಂಬ ಕಥಾನಕ ಸನ್ ೨೦೧೧ ರಲ್ಲಿ ಪ್ರಕಟವಾಯಿತು. == ಉಲ್ಲೇಖಗಳು ==